Kannada actor Hatrick Hero Shiva Rajkumar speaks about Mahadayi protest. The protest is held by farmers in front of BJP Office Malleshwaram, Bengaluru.
ಬೆಂಗಳೂರಿನಲ್ಲಿ ಮಹದಾಯಿ ಹೋರಾಟ ನಡೆಯುತ್ತಿದೆ. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಛೇರಿ ಮುಂದೆ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಅನೇಕ ರೈತರು ಭಾಗಿಯಾಗಿದ್ದಾರೆ. ಇನ್ನು ಸಿನಿಮಾ ನಟರು ಕೂಡ ಈ ಹೋರಾಟಕ್ಕೆ ಸಾಥ್ ನೀಡಬೇಕು ಎಂಬುದು ಹೋರಾಟಗಾರ ಮಾತಾಗಿತ್ತು. ಅದೇ ರೀತಿ ಇಂದು ನಟ ಹಾಗೂ ಕೆ.ಪಿ.ಜೆ.ಪಿ ಪಕ್ಷದ ಮುಖ್ಯಸ್ಥ ಉಪೇಂದ್ರ ''ನಾನು ಹೋರಾಟದಲ್ಲಿ ಭಾಗಿಯಾಗುತ್ತೇನೆ. ಅದೇ ಕೆಲಸವನ್ನು ಈಗ ನಾನು ಮಾಡುತ್ತಿದ್ದೇನೆ. ಅನೇಕರ ಜೊತೆ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ'' ಎಂದಿದ್ದಾರೆ. ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಕೂಡ ಪ್ರತಿಭಟನೆ ಸ್ಥಳಕ್ಕೆ ಬಂದಿದ್ದರು.ಆದರೆ ಈಗ ಈ ಹೋರಾಟದ ಬಗ್ಗೆ ನಟ ಶಿವರಾಜ್ ಕುಮಾರ್ ಸಹ ಮಾತನಾಡಿದ್ದಾರೆ. ''ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇದೆ. ಆದರೆ ನೀವು ಯಾವಾಗಲೂ ನಮ್ಮನ್ನು ಯಾಕೆ ಪ್ರಶ್ನೆ ಮಾಡುತ್ತೀರಾ. ಹೋಗಿ ನೀವೇ ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳನ್ನು ಕೇಳಿ'' ಎಂದಿದ್ದಾರೆ. ಅಂದಹಾಗೆ, ಮಹದಾಯಿ ಹೋರಾಟಕ್ಕೆ ಭಾಗಿಯಾಗದೇ ಇರುವ ವಿಚಾರ ಬಗ್ಗೆ ಶಿವಣ್ಣ ಸಂಪೂರ್ಣವಾಗಿ ಮಾತನಾಡಿದ್ದಾರೆ.